ಹೊಸ ನೇಮಕಾತಿ ಅಧಿಸೂಚನೆ - 2024
ಕರ್ನಾಟಕ ಕಂದಾಯ ಇಲಾಖೆಯಲ್ಲಿ ಭಾರಿ ನೇಮಕಾತಿ ಪರ್ವ
1000-ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಅಧಿಸೂಚನೆ

     ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ. 

I. ಹುದ್ದೆಯ ವಿವರ : 
ಹುದ್ದೆಯ ಹೆಸರು : ಗ್ರಾಮ ಆಡಳಿತ ಅಧಿಕಾರಿ.(VILLAGE ADMINISTRATIVE OFFICER)
ಒಟ್ಟು ಹುದ್ದೆಗಳ ಸಂಖ್ಯೆ : 1000 ಹುದ್ದೆಗಳು.

II. ಶೈಕ್ಷಣಿಕ ವಿದ್ಯಾರ್ಹತೆ : 
ದ್ವಿತೀಯ ಪಿಯುಸಿ ಅಥವಾ ತತ್ಸಮಾನ  ಪರೀಕ್ಷೆ ಪಾಸಾಗಿರಬೇಕು.     
  • ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
  • ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ. 
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ‌ ಶಿಕ್ಷಣ ಕೋರ್ಸ್ / ಹೆಚ್.ಎಸ್.ಸಿ.
  • ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ / ಜೆ ಓ ಡಿ ಸಿ / ಜೆ ಎಲ್ ಡಿ ಸಿ)
III. ವೇತನ ಶ್ರೇಣಿ :   
ಗ್ರಾಮ ಆಡಳಿತ ಅಧಿಕಾರಿ : 21400-42000
     
IV. ವಯೋಮಿತಿ :
ಈ ಹುದ್ದೆಗೆ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷಗಳನ್ನು ಪೂರೈಸಿರತಕ್ಕದ್ದು ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು
  1. ಸಾಮಾನ್ಯ ಅರ್ಹತೆಯ  ಅಭ್ಯರ್ಥಿಗಳಿಗೆ                                 : 35 ವರ್ಷಗಳು. 
  2. ಪ್ರವರ್ಗ 2ಎ,2ಬಿ,3ಎ,3ಬಿ, ಅಭ್ಯರ್ಥಿಗಳಿಗೆ                             : 38 ವರ್ಷಗಳು. 
  3. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ1 ಅಭ್ಯರ್ಥಿಗಳಿಗೆ  : 40 ವರ್ಷಗಳು.  
        ಹಾಗೆಯೇ ಈ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3 (6) ರಲ್ಲಿ ನಿಗದಿಪಡಿಸಿರುವಂತೆ ನಿಗದಿತ ಗರಿಷ್ಠ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗುತ್ತದೆ.

V. ಅರ್ಜಿ ಸಲ್ಲಿಸುವ ವಿಧಾನ : 
  • ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಇದರ ಮೂಲಕ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವುದು. 
  • ಅಭ್ಯರ್ಥಿಗಳು ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿಗಳನ್ನು ಸಲ್ಲಿಸಿದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.    
VI.  ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಾರಂಭ ಹಾಗೂ ಕೊನೆಯ ದಿನಾಂಕ ವಿವರ : 
  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 05-04-2024 ರ ಬೆಳಿಗ್ಗೆ 11 ರಿಂದ 
  • ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   : 04-05-2024 ರವರೆಗೆ
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 07-05-2024 (ಬ್ಯಾಂಕ್ ಕೆಲಸದ ವೇಳೆ ವರೆಗೆ)
VII.  ಅರ್ಜಿಯ ಶುಲ್ಕ :
  • ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗ 2ಎ,2ಬಿ,3ಎ,3ಬಿ, ಅಭ್ಯರ್ಥಿಗಳಿಗೆ    : ರೂ 750/- 
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ1,ಮಾಜಿಸೈನಿಕ,ಅಂಗವಿಕಲ  ಅಭ್ಯರ್ಥಿಗಳಿಗೆ  : ರೂ 500/- 
ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲಾ.

👉ಗ್ರಾಮ ಆಡಳಿತ ಅಧಿಕಾರಿಗಳ ಅಧಿಸೂಚನೆಯ PDFಗಾಗಿ       ಇಲ್ಲಿ ಕ್ಲಿಕ್ಕಿಸಿ
👉ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು                                ಇಲ್ಲಿ ಕ್ಲಿಕ್ಕಿಸಿ
👉Village Administrative Officer Online Application-2024 VIDEOಗಾಗಿ    ಇಲ್ಲಿ ಕ್ಲಿಕ್ಕಿಸಿ

ಇದೇ ರೀತಿಯಾಗಿ ಹೊಸ ಹೊಸ ಮಾಹಿತಿಗಳಿಗಾಗಿ ದಯವಿಟ್ಟು ನನ್ನ ಟೆಲಿಗ್ರಾಂ ಅಥವಾ ವಾಟ್ಸಪ್‌ ಗ್ರುಪ್‌ ಗೆ ಜಾಯಿನ್‌ ಆಗಿರಿ.

Post a Comment

Previous Post Next Post